Download PDF

ಕನ್ನಡ ಕಥನಗಳಲ್ಲಿ ‘ಧಾರ್ಮಿಕ ಆಚರಣಾ ಲೋಕ’ದ ಅವನತಿಯ ಬಿಂಬಗಳು

Author : ಡಾ. ಜಯಶಂಕರ ಎಂ

Abstract :

ಕನ್ನಡ ಕಥನಗಳಲ್ಲಿ ‘ಧಾರ್ಮಿಕ ಆಚರಣಾ ಲೋಕ’ದ ಅವನತಿಯ ಬಿಂಬಗಳನ್ನು ವಿಶ್ಲೇಷಿಸುವುದು ಈ ಸಂಶೋಧನಾ ಲೇಖನದ ಮುಖ್ಯ ಉದ್ದೇಶವಾಗಿದೆ. ಭಾರತೀಯ ಜನಸಮುದಾಯಗಳಲ್ಲಿ ಧರ್ಮಾತೀತ ಮಾನವೀಯತೆ, ಪರಸ್ಪರ ಸಹಿಷ್ಣುತೆ, ಬಹುತ್ವದ ಸ್ವೀಕಾರ ಮತ್ತು ಸಹಬಾಳ್ವೆಯ ಮೌಲ್ಯಗಳು ಆಚರಣೆಗಳ ಮೂಲಕ ರೂಪುಗೊಂಡಿವೆ. ಸೂಫಿ ಪರಂಪರೆ, ತತ್ವಪದಕಾರರ ಚಿಂತನೆ ಹಾಗೂ ಜನಪದ ಧಾರ್ಮಿಕ ಆಚರಣೆಗಳು ವಿವಿಧ ಧರ್ಮಗಳ ಜನರನ್ನು ಸೌಹಾರ್ದದ ನೆಲೆಯಲ್ಲಿ ಬೆಸೆಯುತ್ತವೆ. ಆದರೆ ಆಧುನಿಕ ಕಾಲಘಟ್ಟದಲ್ಲಿ ಕೋಮುವಾದಿ ರಾಜಕಾರಣ, ಧಾರ್ಮಿಕ ಮೂಲಭೂತವಾದ, ಜಾಗತೀಕರಣ ಮತ್ತು ಮಾರುಕಟ್ಟೆ ಹಿತಾಸಕ್ತಿಗಳು ಈ ಮಾನವೀಯ ಸಂಬಂಧಗಳನ್ನು ದುರ್ಬಲಗೊಳಿಸುತ್ತಿವೆ. ಕುಂ. ವೀರಭದ್ರಪ್ಪನವರ ‘ಕೆಂಡದ ಮಳೆ ಕರೆವಲ್ಲಿ ಉದಕವಾಗಿದ್ದವರ ಕಥೆ’, ಅಮರೇಶ ನುಗಡೋಣಿಯವರ ‘ಏ ದಿಲ್ ಮಾಂಗೇ ಮೋರ್’ ಹಾಗೂ ಹನುಮಂತ ಹಾಲಿಗೇರಿಯವರ ‘ಅಲೈ ದೇವ್ರು’ ಕಥೆಗಳನ್ನು ಆಧರಿಸಿ, ಧಾರ್ಮಿಕ ಆಚರಣೆಗಳಲ್ಲಿನ ಸಾಮರಸ್ಯದ ಕುಸಿತ, ಮತೀಯ ವಿಭಜನೆ, ಸಾಮಾಜಿಕ ಬಹಿಷ್ಕಾರ ಮತ್ತು ಪ್ರತಿರೋಧದ ನೆಲೆಗಳನ್ನು ಲೇಖನವು ಪರಿಶೀಲಿಸುತ್ತದೆ. ಈ ಕಥನಗಳು ಧರ್ಮದ ಹೆಸರಿನಲ್ಲಿ ನಡೆಯುವ ಅಮಾನವೀಯತೆಯನ್ನು ಪ್ರಶ್ನಿಸುವುದರೊಂದಿಗೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳ ಪುನರ್ ಸ್ಥಾಪನೆಯ ಅಗತ್ಯವನ್ನು ಪ್ರತಿಪಾದಿಸುತ್ತವೆ.

Keywords :

ಧಾರ್ಮಿಕ ಆಚರಣಾ ಲೋಕ, ಧಾರ್ಮಿಕ ಬಹುತ್ವ, ಜನಪದ ಧರ್ಮ, ಸಹಬಾಳ್ವೆ, ಧಾರ್ಮಿಕ ಸಾಮರಸ್ಯ