ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸ್ತ್ರೀಯರು
Author : ಪ್ರೊ.ಲಿಂಗಪ್ಪ ಎಂ. ಗೋನಾಲ
Abstract :
ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸ್ತಿçÃಯರು ಎಂಬ ಸಮಸ್ಯೆಯನ್ನು ಈ ಸಂಶೋಧನಾ ಲೇಖನದಲ್ಲಿ ಚರ್ಚಿಸಲಾಗಿದೆ. ರಾಜ-ರಾಣಿಯರು, ಸೇವಕರು, ಪ್ರಜೆಗಳು, ಮಂತ್ರಿವರ್ಗ, ವೃತ್ತಿಗಳು, ಶಿಕ್ಷಣ, ಯುದ್ಧ, ಹಬ್ಬ-ಹರಿದಿನಗಳು, ದೇವರು, ಧರ್ಮದಾಚರಣೆ, ಜನನ, ಮರಣಗಳ ನಡುವಿನ ಮನುಷ್ಯ ಸಂಸ್ಕಾರಗಳು, ಚರಿತ್ರೆ, ಧಾರ್ಮಿಕತೆ ಸಮಾಜ, ಆರ್ಥಿಕತೆ, ನಿಸರ್ಗ, ಪಶು-ಪ್ರಾಣಿಗಳು, ಸರಿಸೃಪಗಳು, ದೇವತೆಗಳು, ದೇವಮಾನವರು, ಕಿನ್ನರ-ಕಿಂಪುರುಷರು, ಅಧಿಕಾರಿ, ಅಧೀನ ಅಧಿಕಾರಿ, ಶ್ರೇಣೀಕೃತ ಸಮಾಜದ ವ್ಯವಸ್ಥೆ, ಈ ಮುಂತಾದ ಸಂಗತಿಗಳನ್ನು ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ವರ್ಣಿತವಾಗಿವೆ. ಸಮಾಜದ ಮೂಲ ಮನುಷ್ಯ. ಮನುಷ್ಯನ ಪ್ರತಿಚಿತ್ರವೇ ಕೃತಿಪಾತ್ರ. ಕಾವ್ಯಗಳಲ್ಲಿ ಗಂಡು-ಹೆಣ್ಣು ಪಾತ್ರಗಳ ಚಿತ್ರಣವು ಬಂದಿವೆ. ಸೃಷ್ಟಿಯ ಮೂಲವೇ ಸ್ತಿçà ಆದುದರಿಂದ ಹೆಣ್ಣನ್ನು ಸಾಹಿತ್ಯದಲ್ಲಿ ಹಲವು ಬಗೆಯಲ್ಲಿ ವರ್ಣಿಸಿರುವುದಿದೆ.
ಕನ್ನಡ ಕವಿಗಳು ಸಾಮಾನ್ಯವಾಗಿ ಪ್ರಾರ್ಥನೆ ಅಥವಾ ಪೀಠಿಕೆಯಲ್ಲಿ ಸ್ತಿçà ದೇವತಾ ಸ್ತುತಿಯ ಮೂಲಕ ಕಾವ್ಯಾರಂಭ ಮಾಡುವರು. ಗೌರಿ, ಲಕ್ಷಿö್ಮÃ, ಸರಸ್ವತಿ, ಶಾರದೆ, ವಾಗ್ದೇವಿ ಹೆಸರುಗಳುಳ್ಳ ದೇವತಾ ಸ್ತುತಿಯನ್ನು ಕಾಣುವೆವು. ಆದರೆ ಅವರು ತಮ್ಮ ಕಾವ್ಯಗಳಲ್ಲಿ ಹಲವು ಬಗೆಯ ಮಹಿಳಾ ಪಾತ್ರಗಳನ್ನು, ಮಹಿಳಾ ಸಂವೇದನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಪುರಾದ ಪಾತರಗಳು, ರಾಣಿಯರು, ತಾಯಿ, ಮಗಳು, ಅಜ್ಜಿ, ದಾಸಿಯರು, ಸೇವಕಿಯರು, ವಾರಾಂಗನೆಯರು, ವೇಶ್ಯೆಯರು, ಸಂಗೀತಗಾರರು, ಗಾಯಕಿಯರು, ನರ್ತಕಿಯರು, ಅಲ್ಲದೆ ಐತಿಹಾಸಿಕ ಸಮಕಾಲೀನ ವ್ಯಕ್ತಿ ಚಿತ್ರಗಳನ್ನು ಕನ್ನಡ ಪ್ರಾಚೀನ ಕಾವ್ಯಗಳಲ್ಲಿ ಅವುಗಳ ಹಾವಾ-ಭಾವಾ—ಜೀವಾ ತುಂಬಿ ಸಜೀವ ಮನುಷ್ಯ ಮೌಲ್ಯಗಳನ್ನು ಬಿತ್ತರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ವಡ್ಡಾರಾಧನೆಯಿಂದ ನಯಸೇನನವರೆಗೆ ಚಿತ್ರಿತವಾದ ಸ್ತಿçÃಯರನ್ನು ಕುರಿತು ಚಿರ್ಚಿಸುವುದೇ ಈ ಲೇಖನದ ಮುಖ್ಯ ಉದ್ದೇಶವಾಗಿದೆ.
Keywords :
ಪ್ರಾಚೀನ ಕಾಲದ ಸ್ತಿçÃಯರ ಸ್ಥಾನಮಾನವನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ. ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ ಸ್ತಿçÃಯರಿಗಿದ್ದ ಸಮಾಜದ ಕಟ್ಟುಪಾಡುಗಳು ಮತ್ತು ಸ್ವಾತಂತ್ರö್ಯ ಹೇಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಸಾಮಾಜಿಕ.