Download PDF

ಪಂಪನ ಕಾಲದ ರಾಜನೀತಿಯ ವಿಶ್ಲೇಷಣಾತ್ಮಕ ಕೃತಿಯಾಗಿ ವಿಕ್ರಮಾರ್ಜುನ ವಿಜಯ ಒಂದು ಹೊಸ ದೃಷ್ಟಿಕೋನ

Author : ಡಾ.ಹೆಚ್.ಎಸ್

Abstract :

ಪ್ರಸ್ತುತ ಲೇಖನದಲ್ಲಿ ಪಂಪನು ತನ್ನ ಮಹಾಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಚಿತ್ರಿಸಿರುವ ಮಹಾ ಭಾರತದ ಕಥನ ನಿರೂಪಣೆಯು ಅಂದಿನ ರಾಜಕೀಯ ವಿದ್ಯಮಾನಗಳ ಮತ್ತು ಪ್ರಚಲಿತವಾಗಿದ್ದ ತಾತ್ವಿಕ ಚಿಂತನೆಗಳ ಕಾವ್ಯ ಸ್ವರೂಪವೇ ಆಗಿದೆ ಎಂಬ ಅಭಿಪ್ರಾಯವನ್ನು ಕುರಿತು ವಿಶ್ಲೇಷಿಸಲಾಗಿದೆ. ಮೂಲ ಮಹಾ ಭಾರತದ ಕತೆಯು ಹಲವಾರು ಹಂತಗಳಲ್ಲಿ ಪರಿಷ್ಕೃತಗೊಂಡು ಸುದೀರ್ಘವಾದ ಕಥಾನಕವಾಯಿತು ಎಂಬ ಕಾವ್ಯ ಪ್ರಮಾಣಿತ ವಾದವಿದೆ. ಮಹಾ ಭಾರತದ ಮೂಲ ಕತೆಯು ವಿವಿಧ ಭಾಷೆಯ ಆವೃತ್ತಿಗಳ ಮೂಲಕ ನೂತನ ರೀತಿಯಲ್ಲಿ ಪ್ರಣೀತಗೊಂಡು ಪ್ರಚಲಿತ ರಾಜಕೀಯ ವಿದ್ಯಮಾನಗಳ ಸಾರ ಸಂಗ್ರಹವಾಗಿದ್ದವು ಎಂಬ ಕನ್ನಡ ಸಾಹಿತ್ಯ ಮತ್ತು ಸಾರಸ್ವತ ಲೋಕದ ಅಭಿಪ್ರಾಯಗಳು ಇವೆ. ಅರಸೊತ್ತಿಗೆಗಳಲ್ಲಿ ಆಶ್ರಯ ಪಡೆದಿರುತ್ತಿದ್ದ ಕವಿಗಳು ತಮ್ಮ ಆಶ್ರಯದಾತ ಅರಸರನ್ನು ಉಲ್ಲೇಖಿಸಿ ವ್ಯಕ್ತಿಗತವಾಗಿ ಅವರನ್ನು ಕಥಾ ನಾಯಕನಂತೆ ಬಿಂಬಿಸುವ ಕಾವ್ಯ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ.
ಇದಕ್ಕೆ ಹಿನ್ನೆಲೆಯಾಗಿ ಪಂಪನು ತನ್ನ ಆಶ್ರಯದಾತ ಅರಸನ ಕುರಿತು ರಚಿಸಿರುವ ವಿಕ್ರಮಾರ್ಜುನ ವಿಜಯ ಎಂಬ ಚಂಪೂ ಕಾವ್ಯವು 9-10 ನೇ ಶತಮಾನಗಳ ರಾಜಕೀಯ ಬೆಳವಣಿಗೆಗಳ ಪ್ರತಿಬಿಂಬದಂತೆ ಇದ್ದು ಈ ಕೃತಿಯನ್ನು ರಾಜನೀತಿಯ ಹಿನ್ನೆಲೆಯಲ್ಲಿ ಅವಲೋಕಿಸುವ ಪ್ರಯತ್ನವನ್ನು ಮಾಡುವುದು ಮತ್ತು ವೇಮುಲವಾಡದ ಸುತ್ತ ಮುತ್ತ ಇರುವ ಪುರಾತತ್ವ ನೆಲೆಗಳನ್ನು ಪುನರ್ ಸಂಶೋಧಿಸುವ ಅನಿವಾರ್ಯತೆ ಕುರಿತು ಸಂಶೋಧಕರ ಗಮನ ಸೆಳೆಯುವ ಮತ್ತು ವೇಮುಲವಾಡದ ಇಮ್ಮಡಿ ಅರಿಕೇಸರಿ ಅರಸನ ಬಗ್ಗೆ ಈಗಾಗಲೇ ದೊರಕಿರುವ ಸಾಹಿತ್ಯಕ ಮತ್ತು ಪುರಾತತ್ವ ಆಕರಗಳನ್ನು ಮರು ಶೋಧಿಸುವ ಅಗತ್ಯತೆ ಕುರಿತು ವಿವರಿಸುವ ಪ್ರಯತ್ನ ಮಾಡಲಾಗಿದೆ.

Keywords :

ಪಂಪ, ವಿಕ್ರಮಾರ್ಜುನ ವಿಜಯ, ರಾಜನೀತಿಯ ವಿಶ್ಲೇಷಣೆ.