ಕುಮಾರವ್ಯಾಸನ ಭಾರತ ಕಾವ್ಯದಲ್ಲಿ ದುರಂತ ಕರ್ಣನ ಚಿತ್ರಣ
Author : ಡಾ. ಅಮೃತಿ ರಾಜೇಶ್
Abstract :
ಮಹಾಭಾರತಕಾವ್ಯದಲ್ಲಿ ಕರ್ಣನ ವ್ಯಕ್ತಿತ್ವವೇ ಸಂಕೀರ್ಣವಾದುದು. ಕವಿಯ ಮನೋಧರ್ಮದ ಸೂಕ್ಷö್ಮತೆಗೆ ಇಂಥ ಮಾತುಗಳು ಒಗ್ಗುವುದಿಲ್ಲವೇನೋ? ತನ್ನನ್ನು ತಾನೇ ಸಂಕಟದಲ್ಲಿ ಸಿಲುಕಿಸಿಕೊಳ್ಳುವ ಕರ್ಣನು ಬದುಕು ವಿಚಿತ್ರ ತೊಳಲಾಟದಲ್ಲಿರುವುದು ಗೋಚರಿಸುತ್ತದೆ. ತನ್ನ ವಿಚಾರದಲ್ಲಿ ನಂಬಿಕೆಯನ್ನು ಮೀರಿ ಬದಲಾಗುತ್ತಿರುವ ಸನ್ನಿವೇಶಗಳಿಗೆ ಆತ ಒಳಗಾಗುತ್ತಾನೆ. ಇಂಥ ಪಾತ್ರವನ್ನು ಕೇಂದ್ರವಾಗಿಟ್ಟುಕೊAಡು ಕರ್ಣನನ್ನು ವಿಚಾರ ಮಾಡದೇ ಇರುವ ಅವಿವೇಕ ಎನ್ನುವುದೇ ಅಥವಾ ಪರಿಸರದ ಒತ್ತಡಗಳಲ್ಲಿ ಕಾರಣ ಹುಡುಕಬೇಕೆ ಇಲ್ಲವಾದರೆ ಪಾತ್ರದ ಮನಸ್ಥಿತಿ ಮತ್ತು ಪರಿಸರದ ಒತ್ತಡಗಳನ್ನು ಸಂಧಿಸಿ ಅರ್ಥಗಳನ್ನು ಕಂಡುಕೊಳ್ಳುವ ಸಾಧ್ಯತೆಗಳು ಹಾಗೂ ಆಲೋಚನೆಗಳು ಸಾಕಷ್ಟಿವೆ.
ಕುವೆಂಪುರವರು ತನ್ನ ‘ಕುಮಾರವ್ಯಾಸನ ದುರಂತ ಕರ್ಣ’ ಲೇಖನದಲ್ಲಿ ಕುವೆಂಪು ಅವರ ಕರ್ಣ ದುರಂತ ವ್ಯಕ್ತಿ. ಕುಮಾರವ್ಯಾಸನ ಕರ್ಣನೂ ದುರಂತವ್ಯಕ್ತಿ ಎನ್ನುತ್ತಾರೆ. ಅಂದರೆ ‘ತುದಿಯಲ್ಲಿ ಆದ ಅನ್ಯಾಯದಿಂದ ಆತ ಅಕಾಲ ಮೃತ್ಯುವಿಗೆ ತುತ್ತಾದ ಜೀವ’ ಎನ್ನುತ್ತಾರೆ. ‘ಮಿತ್ರನ ಮೇಲ್ಮೆöÊಗಾಗಿ ಮೂರು ಲೋಕಗಳೂ ಮೆಚ್ಚುವಂತೆ ಶ್ರೀಕೃಷ್ಣ, ಅರ್ಜುನರಂತಹ ಪ್ರತಿವೀರರ ಸಮ್ಮುಖದಲ್ಲಿ ಹೋರಾಡಿ ಕೊನೆಗೆ ತನ್ನ ಹೃದಯ ದೌರ್ಬಲ್ಯವೂ ತಂದೊಡ್ಡಿದ ಅನಾರ್ಯ ಅನ್ಯಾಯಕ್ಕೆ ತುತ್ತಾದ ಕರ್ಣನ ಅಂತ್ಯ ಅಮಂಗಳಕರವೂ ಅಲ್ಲ, ದುರಂತ ವ್ಯಕ್ತಿಯೂ ಅಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಹೀಗೆ ಕರ್ಣನ ಹಿನ್ನೆಲೆಯನ್ನು ನೋಡಿದರೆ ಆತನೇನು ಮೊದಲು ಉನ್ನತಸ್ಥಿತಿಯಲ್ಲಿದ್ದವನಲ್ಲ. ಸೂತ ಪುತ್ರತ್ವದಿಂದ ಕ್ಷತ್ರಿಯತ್ವಕ್ಕೆ ಏರಿ, ಅಂಗಾಧಿಪತಿಯಾಗಿ ತನ್ನ ಕೀರ್ತಿಯ ಪ್ರಚಂಡ ಜ್ಯೋತಿಯು ಪ್ರಜ್ವಲಿಸುತ್ತಿರುವಾಗಲೇ ಆ ಜ್ವಾಲೆಯ ನಟ್ಟನಡುವೆ ಭಸ್ಮೀಭೂತನಾದ ವ್ಯಕ್ತಿ. ಆತನ ದೋಷವೆಂದರೆ ಗುಣದ ದೌರ್ಬಲ್ಯ. ಏಕೆಂದರೆ ದಾನದ ಹೆಸರಿನಲ್ಲಿ ತನ್ನ ಜೀವನವನ್ನೇ ತ್ಯಜಿಸಿದವನು. ಕರ್ಣನು ದುರಂತ ವ್ಯಕ್ತಿಯಲ್ಲ. ಅದೃಷ್ಟ, ಕರ್ಮಫಲ, ವಿಧಿಲೀಲೆ. ಮಹಾಭಾರತದಲ್ಲಿ ಬರುವ ವ್ಯಕ್ತಿಗಳ ಗುಣಕಥನಗಳು ಅದರ ಕಾರಣಕರ‍್ಯಗಳನ್ನು ವಿಮರ್ಶಿಸಬೇಕಾದರೆ ಸಮಷ್ಟಿದೃಷ್ಠಿಯಿಂದ ಚ್ಯುತರಾಗಿ ಬಿಡಬಾರದು. ಸಮಸ್ತ ಮಹಾಭಾರತದ ಅಂತರಾಳದಲ್ಲಿ ಗುಪ್ತಗಾಮಿನಿಯಂತೆ ಹರಿಯುತ್ತಿರುವ ಅದೃಷ್ಟಶಕ್ತಿ. ಕೃಷ್ಣನನ್ನು ಹೊರತುಪಡಿಸಿದರೆ ಉಳಿದೆಲ್ಲ ಪಾತ್ರಗಳು ಈ ಪ್ರವಾಹದಲ್ಲಿ ಕೊಚ್ಚಿಹೋದವರೇ ಆಗಿದ್ದಾರೆ. ಹಾಗಾಗಿ ವ್ಯಾಸಭಾರತದಿಂದ ಇಲ್ಲಿಯವರೆಗೆ ವಿವಿಧ ಕಾಲಘಟ್ಟಗಳಲ್ಲಿ ವಿವಿಧ ಧಮ್ದ ವಿವಿಧ ಲೇಖಕರ ದೃಷ್ಟಿಯಲ್ಲಿ ಮೂಡಿಬಂದಿರುವ ಕರ್ಣನ ವ್ಯಕ್ತಿತ್ವ ಹಾಗೂ ಅವನ ದುರಂತದ ಬಗ್ಗೆ ವಿಮರ್ಶಕರ ಅಭಿಪ್ರಾಯಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆೆ.
Keywords :
ರಾಜಪ್ರಭುತ್ವ, ಮೋಸ (ಕುತಂತ್ರ), ತ್ಯಾಗ, ಸ್ವಾರ್ಥ, ಅಧಿಕಾರ.