ನಗರಗಳ ಸುಧಾರಣೆ, ಸುಸ್ಥಿರ ಭವಿಷ್ಯ, ಹವಾಮಾನ ಬದಲಾವಣೆಯ ವ್ಯತಿರಿಕ್ತ ಪರಿಣಾಮಗಳ ಉಪಶಮನ-ಒಂದು ಅಧ್ಯಯನ
Author : ಡಾ. ಮೋನಾ ಮೆಂಡೋನ್ಸಾ
Abstract :
ಹವಾಮಾನ ಬದಲಾವಣೆ-ಜಾಗತಿಕವಾಗಿ ಗಂಭೀರ ಕಳವಳವನ್ನುಂಟುಮಾಡುತ್ತಿರುವ ಸಂಗತಿ ಕಳೆದ ಕೆಲವು ದಶಕಗಳಿಂದ ಶೈಕ್ಷಣಿಕ ವಲಯದಲ್ಲಿ ಬಹು ಚರ್ಚಿತ ಹಾಗು ಅತಿ ಮುಖ್ಯ ಸಂಗತಿಯಾಗಿರುವ ಹವಾಮಾನ ಬದಲಾವಣೆಯ ಕುರಿತು ವಿವಿಧ ಜ್ಞಾನ ಶಾಖೆಗಳ ವಿದ್ವಾಂಸರು ಹಾಗು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಾಗು ಇಡೀ ಜೀವ ಸಂಕುಲದ ಮೇಲೆ ಅದು ಉಂಟುಮಾಡಬಹುದಾದ ಪರಿಣಾಮಗಳ ಕುರಿತು ಸತತ ಅಧ್ಯಯನಗಳನ್ನು ನಡೆಸಿ, ಅವುಗಳ ವರದಿಗಳನ್ನು ದಾಖಲಿಸಿದ್ದಾರೆ. ಅಭಾವಿಕವಾಗಿರುವ ನಗರ ಪ್ರದೇಶಗಳ ವಿಸ್ತರಣೆ, ಅದರಲ್ಲೂ ನಿರ್ದಿಷ್ಟವಾಗಿ ಭಾರತದಂತ ದೇಶಗಳಲ್ಲಿ ನಾಯಿಕೊಡೆಗಳಂತೆ ತಲೆಯೆತ್ತುತ್ತಿರುವ ಬೃಹತ್ ನಗರಗಳು, ನಗರ ಪ್ರದೇಶಗಳಲ್ಲಿ ದಾಖಲೆಯ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಜನಸಂಖ್ಯೆ ಹಾಗು ಇವುಗಳ ಕಾರಣದಿಂದ ನಿರ್ಮಾಣವಾಗುತ್ತಿರುವ ವಿಸ್ತಾರವಾದ ಮಹಾನಗರಗಳು ತುರ್ತಾಗಿ ಗಮನಿಸಿ, ಪರಿಣಾಮಕಾರಿಯಾದ ಕಾರ್ಯತಂತ್ರಗಳ ಮೂಲಕ ಪರಿಹರಿಸಿಕೊಳ್ಳಬೇಕಾದ ಅಪಾಯದ ಸರಮಾಲೆಗಳನ್ನು ಆಹ್ವಾನಿಸುವಂತಿವೆ. ಇಂಥ ಅಪಾಯಗಳ ಮೂಲ ಕಾರಣಗಳನ್ನು ಗುರುತಿಸಿ, ನಗರ ಪ್ರದೇಶಗಳ ಆದ್ಯ ಪರಿವರ್ತನೆಯ ಮಾರ್ಗಗಳ ಕುರಿತು ಚರ್ಚಿಸುವುದು ಹಾಗು ಈ ನಗರ ಪ್ರದೇಶಗಳು ಹವಾಮಾನ ಬದಲಾವಣೆಯ ಭೀಕರ ಪರಿಣಾಮಗಳನ್ನು ತಗ್ಗಿಸಿಕೊಂಡು, ಚೇತರಿಕೆ ಹಾಗು ಸುಸ್ಥಿರ ಹಾದಿಗೆ ಮರಳಲು ಅವಶ್ಯವಾಗಿರುವ ಕ್ರಮಗಳನ್ನು ದಾಖಲಿಸುವುದು ಈ ಲೇಖನದ ಪ್ರಮುಖ ಉದ್ದೇಶ. ಅದೇ ರೀತಿ ಸಾಂಸ್ಕೃತಿಕ ಪರಂಪರೆಯ ತಾಣಗಳನ್ನು ಒಳಗೊಂಡAತೆ ಜೀವ ಪರಿಸರ ವ್ಯವಸ್ಥೆ, ಸಾಮಾಜಿಕ ಸಂರಚನೆಗಳು ಹಾಗು ಮೂಲ ಸೌಕರ್ಯಗಳ ವಿನಾಶಕ್ಕೆ ಕಾರಣವಾಗಿರುವ ಸಂಗತಿಗಳನ್ನು ಸಮಗ್ರವಾಗಿ ಅರ್ಥೈಸಿಕೊಳ್ಳುವುದರ ಜೊತೆಗೆ ಪರಿಸರ ಹಾಗು ನಗರ ಪ್ರದೇಶಗಳ ವೈವಿಧ್ಯ ಜನಸಂಖ್ಯೆಯ ಅಭ್ಯುದ್ಯಯವನ್ನು ಆದ್ಯತೆಯಾಗಿಟ್ಟುಕೊಂಡು ವ್ಯಕ್ತಿಗತವಾಗಿ, ಸಮುದಾಯಿಕವಾಗಿ ಹಾಗು ಸಾಮಾಜಿಕವಾಗಿ ನಾವು ಎದುರಿಸಬೇಕಿರುವ ಪ್ರಶ್ನೆಗಳು ಹಾಗು ಸವಾಲುಗಳು ಮತ್ತು ಹೊತ್ತುಕೊಂಡಿರುವ ಜವಾಬ್ದಾರಿಗಳ ಕುರಿತು ಈ ಲೇಖನದಲ್ಲಿ ಬೆಳಕು ಚೆಲ್ಲಲಾಗಿದೆ.
Keywords :
ಹವಾಮಾನ ಬದಲಾವಣೆ, ನಗರೀಕರಣ, ಭಾರತೀಯ ನಗರಗಳು, ತಡೆಗಟ್ಟುವ ಕ್ರಮಗಳು.