ದಕ್ಷಿಣ ಭಾರತೀಯ ದೇವಾಲಯಗಳಲ್ಲಿ ಲೋಹ ಸಂರಕ್ಷಣೆ: ಪುರಾತನ ಸಾಹಿತ್ಯದ ಅನಾವರಣ
Author : ಡಾ. ಮೋನಾ ಮೆಂಡೋನ್ಸಾ
Abstract :
ದೇಗುಲಗಳ ಬೀಡು' ಎಂದೇ ಪ್ರಖ್ಯಾತವಾಗಿರುವ ದಕ್ಷಿಣ ಭಾರತಕ್ಕೆ ಧಾರ್ಮಿಕವಾಗಿ ಹಾಗು ವಾಸ್ತುಶಿಲ್ಪ ಕ್ಷೇತ್ರದಲ್ಲಿ ಶ್ರೀಮಂತ ಪರಂಪರೆಯಿದೆ. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗು ಕೇರಳ ರಾಜ್ಯಗಳನ್ನು ಒಳಗೊಂಡಿರುವ ಈ ಪ್ರದೇಶದಲ್ಲಿ ಸಾವಿರಾರು ದೇಗುಲಗಳು ಸ್ಥಾಪಿಸಲ್ಪಟ್ಟಿವೆ. ಈ ದೇಗುಲಗಳು ಆಧ್ಯಾತ್ಮ, ಭಕ್ತಿ ಹಾಗು ಸಂಸ್ಕೃತಿಯನ್ನು ವ್ಯಾಪಕವಾಗಿ ಪಸರಿಸುವ ಶ್ರದ್ಧಾ ಕೇಂದ್ರಗಳೆAದೇ ಪರಿಗಣಿಸಲ್ಪಟ್ಟಿವೆ. ಮಹಾಬಲಿಪುರಂನ ಶೋರ್ (ತೀರ) ದೇವಾಲಯ, ತಂಜಾವೂರ್‌ನ ಬೃಹದೇಶ್ವರ ದೇವಾಲಯ ಹಾಗು ಮಧುರೈನ ಮೀನಾಕ್ಷಿ ದೇವಾಲಯಗಳಂಥ ಭವ್ಯ ದೇವಾಲಯಗಳನ್ನೊಳಗೊಂಡAತೆ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿರುವ ಹಲವಾರು ಮಹೋನ್ನತ ದೇಗುಲಗಳನ್ನು ವಿಶೇಷವಾಗಿ ತಮಿಳುನಾಡಿನಲ್ಲಿ ಗಮನಿಸಬಹುದು. ಈ ಪ್ರದೇಶದ ಸಂಸ್ಕೃತಿ ಹಾಗು ಕಲಾತ್ಮಕ ಪರಂಪರೆಯ ಶ್ರೀಮಂತಿಕೆಯ ಪ್ರತಿರೂಪಗಳೆಂದೇ ಬಿಂಬಿಸಲ್ಪಡುವ ಈ ದೇವಾಲಯಗಳಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮ, ಆಚರಣೆ ಹಾಗು ವಾಸ್ತುಶಿಲ್ಪದ ಅಂಶಗಳಲ್ಲಿ ಲೋಹದ ವಸ್ತುಗಳ ಗಮನಾರ್ಹವಾದ ಬಳಕೆಯನ್ನೂ ಗುರುತಿಸಬಹುದು. ಈ ಎಲ್ಲ ದೇವಾಲಯಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಕಂಚು, ತಾಮ್ರ, ಚಿನ್ನ ಹಾಗು ಬೆಳ್ಳಿಯಂಥ ಲೋಹಗಳ ಬಳಕೆ ಸರ್ವೇ ಸಾಮಾನ್ಯವಾಗಿತ್ತು. ಅಲ್ಲಿ ಸ್ಥಾಪಿಸಲಾಗಿದ್ದ ಲೋಹದ ವಿಗ್ರಹಗಳ ದೃಢತೆ ಹಾಗು ಸಂರಕ್ಷಣೆಗೆ ಬಹುದೊಡ್ಡ ಅಪಾಯವಾಗಿ ಪರಿಣಮಿಸಿದ್ದು, ಹವಾಮಾನ ಬದಲಾವಣೆ. ಉಷ್ಣಾಂಶ, ತೇವಾಂಶಗಳ ಬದಲಾವಣೆ, ಅಕಾಲಿಕ ಮಳೆ ಹಾಗು ಮಾಲಿನ್ಯದ ಮಟ್ಟದಲ್ಲಿ ಏರಿಕೆ-ಇವು ಇಂತಹ ಅಪಾಯಗಳಿಗೆ ಬಹುಮುಖ್ಯ ಕಾರಣಗಳು. ಲೋಹದ ವಸ್ತುಗಳನ್ನೂ ಉಪಯುಕ್ತವಾಗಿಡಲು ಈ ದೇವಾಲಯಗಳಲ್ಲಿ ಅನುಸರಿಸುತ್ತಿದ್ದ ಕೆಲವು ಸಾಂಪ್ರದಾಯಿಕ ವಿಧಾನಗಳ ಮೇಲೆ ಬೆಳಕು ಚೆಲ್ಲುವುದು ಈ ಲೇಖನದ ಪ್ರಮುಖ ಉದ್ದೇಶ. ಲೋಹಗಳ ಸಂರಕ್ಷಣೆಗೆAದು ಬಳಸಲಾಗುತ್ತಿದ್ದ ಈ ವಿಧಾನಗಳ ಪೈಕಿ ಬಹುತೇಕ ವಿಧಾನಗಳು ಸಾಕಷ್ಟು ಜನಪ್ರಿಯವಾಗಿದ್ದವು ಹಾಗು ಈ ಪಾರಂಪರಿಕ ಸ್ಮಾರಕಗಳ ಮೇಲೆ ಹವಾಮಾನ ಬದಲಾವಣೆಯಿಂದ ಆಗಬಹುದಾಗಿದ್ದ ಋಣಾತ್ಮಕ ಪರಿಣಾಮಗಳನ್ನು ತಡೆಗಟ್ಟುವಲ್ಲಿ ನಿರ್ಣಾಯಕ ಸಾತ್ವನವಹಿಸುತ್ತಿದ್ದವು. ಇದರ ಜೊತೆಗೆ ಲೋಹಗಳನ್ನು ಸುಸ್ಥಿರವಾಗಿಡುವ ಪ್ರಮುಖವಾದ ಸಂರಕ್ಷಣಾ ತಂತ್ರಗಳ ಬಳಕೆಯ ವಿಧಾನಗಳ ಕುರಿತಾಗಿಯೂ ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ.ೆ
Keywords :
ದಕ್ಷಿಣ ಭಾರತ, ದೇವಾಲಯಗಳು, ಲೋಹಗಳು, ಹವಾಮಾನ ಪರಿವರ್ತನೆ, ಸಂರಕ್ಷಣಾ ತಂತ್ರಜ್ಞಾನಗಳು.