Download PDF

ಡಾ.ಬಿ.ಆರ್ ಅಂಬೇಡ್ಕರ್ ಭಾಷಣಗಳು ಮತ್ತು ಅಸ್ಪೃಶ್ಯ ವಿದ್ಯಾರ್ಥಿ ಯುವ ಸಮುದಾಯ

Author : ಪ್ರಕಾಶ. ಬಿ

Abstract :

ಡಾ.ಬಿ.ಆರ್.ಅಂಬೇಡ್ಕರ್ ಅವರು ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಮಾಡಿರುವ ಭಾಷಣಗಳು ಅಸ್ಪೃಶ್ಯ ವಿದ್ಯಾಥಿ ಯುವ ಸಮುದಾಯವನ್ನು ಹೇಳಿರುವ ಮಾತುಗಳನ್ನು ಸಂಗ್ರಹಿಸಿ ಇಲ್ಲಿ ತಿಳಿಸಲಾಗಿದೆ. ೧ಕೇವಲ ಶಿಕ್ಷಣವನ್ನು ಪಡೆದ ಮಾತ್ರಕ್ಕೆ ಆ ಯೋಗ್ಯತೆ ಬರುವುದೆಂದು ನಾನು ಭಾವಿಸುವುದಿಲ್ಲ.ಮನುಷ್ಯನು ವಿದ್ಯಾವಂತನಾಗಿ ಸಮಾಜಕ್ಕೆ ಉಪಯುಕ್ತನಾಗುತ್ತಾನೆ ಎಂದೇನೂ ಇಲ್ಲ. ಅವನಲ್ಲಿ ನೀಚತನ, ಸುಳ್ಳು ಹೇಳುವುದು. ಜಗಳವಾಡುವುದು ಇತ್ಯಾದಿ ದುರ್ಗುಣಗಳಿವೆ.ಇಂದಿನ ಪರಿಸ್ಥಿತಿಯಲ್ಲಿ ಮೇಲ್ವರ್ಗದ ವಿದ್ವಾಂಸರು ಅಸ್ಪೃಶ್ಯರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಇದು ನಡೆಯುತ್ತಲೇ ಇರುವುದಕ್ಕೆ ಕಾರಣ, ಸ್ಪೃಶ್ಯಾಸ್ಪೃಶ್ಯ ಸಮಸ್ಯೆ ಕಾಲಾತೀತವಾಗಿದೆ ಮತ್ತು ಇದು ಯಾವಾಗ ಕೊನೆಗೊಳ್ಳುತ್ತದೆ ಎಂದು ಯಾರೂ ಎದೆತಟ್ಟಿ ಹೇಳಲು ಸಾಧ್ಯವಿಲ್ಲ. ಅಸ್ಪೃಶ್ಯತೆಯ ನಿವಾರಣೆಗೆ ಹಲವು ಮಾರ್ಗಗಳಿವೆ. ಅವುಗಳಲ್ಲಿ ಮಹತ್ವದ್ದೆಂದರೆ ರಾಜಕೀಯ ಅಧಿಕಾರವನ್ನು ನಿಮ್ಮ ಕೈಗೆ ತೆಗೆದುಕೊಳ್ಳುವುದೇ ಆಗಿದೆ. ೨ಇತ್ತೀಚೆಗೆ ನಿಮ್ಮ ಸುಧಾರಣೆಗಾಗಿ ಅನೇಕ ಸ್ಪೃಶ್ಯರು ಜನರು ಮುಂದೆ ಬರುತ್ತಿದ್ದಾರೆ. ಅಧಿಕಾರಿಗಳು ಸಹಿತ ನಿಮಗೆ ಸಹಾನುಭೂತಿ ತೋರಿಸುತ್ತಾರೆ. ನಿಧಾನವಾಗಿ ಅವರು ಹೇಳುತ್ತಾರೆ ನಿಮ್ಮ ನಡೆನುಡಿ ಸುಧಾರಿಸಿಕೊಳ್ಳಿ, ಸ್ವಚ್ಛವಾಗಿರಿ. ಹೊಸ ದೃಷ್ಟಿಕೋನವನ್ನು ಹೊಂದಿರಿ ಎಂದು. ಅವರು ಹೀಗೆ ಹೇಳುವುದು ತಪ್ಪಲ್ಲ. ಆದರೆ ನೆನಪಿಡಿ. ಇವೆಲ್ಲವೂ ರಾಜಕೀಯ ಅಧಿಕಾರಕ್ಕೆ ಒಳಪಟ್ಟಿವೆ.ಸರಕಾರವು ಅಸ್ಪೃಶೋದ್ಧಾರದ ವಿಚಾರದಲ್ಲಿ ಕಾನೂನು ರೂಪಿಸುವ ಎದೆಗಾರಿಕೆಯನ್ನು ತೋರುತ್ತಿಲ್ಲ. ಮೇಲ್ಜಾತಿಗಳ ಕೋಪವನ್ನು ತನ್ನ ಮೇಲೆ ಸೆಳೆದುಕೊಳ್ಳುವ ಇಚ್ಛೆ ಅದಕ್ಕಿಲ್ಲ.ರಾಜಕೀಯ ಅಧಿಕಾರದ ನಮ್ಮ ಕೈಗೆ ಬಾರದ ಹೊರತು ನಮ್ಮ ಸುಧಾರಣೆಗೆ ನಿಜವಾದ ಬಲ ಸಿಕ್ಕುವುದಿಲ್ಲ.ನಾವು ರಾಜಕೀಯ ಅಧಿಕಾರ ಹಿಡಿಯಲು ಶ್ರಮಿಸುವುದರ ಜೊತೆಗೇ ಬಲಾಡ್ಯರ ದಬ್ಬಾಳಿಕೆ ತೊಡೆಯುತ್ತಲೂ ಶ್ರಮಿಸಬೇಕು. ಕೊಂಕಣದಲ್ಲಿ ಅಸ್ಪೃಶ್ಯರ ಸ್ಥಿತಿಯು ಗ್ರಾಮಸ್ಥರ ಮರ್ಜಿಯ ಮೇಲೆ ಅವಲಂಬಿತವಾಗಿದೆ. ಗ್ರಾಮ ಪಾಟೀಲರ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಇಲ್ಲವಾದರೆ ಅವರು ಅಸ್ಪೃಶ್ಯರ ಮೇಲೆ ಗೂಂಡಾಗಿರಿ ಮಾಡುತ್ತಾರೆ. ಕಠಿಣ ಸಾಮಾಜಿಕ ಬಹಿಷ್ಕಾರವನ್ನು ಹೇರಲಾಗುತ್ತದೆ. ಇಂಥ ಬಹಿಷ್ಕಾರಗಳಿಂದಾಗಿ ಅಸ್ಪೃಶ್ಯರು ಭಯಬೀಳುತ್ತಾರೆ ಮತ್ತು ಸಹಜವಾಗಿಯೇ ಪ್ರಸ್ತುತ ಚಳುವಳಿಯಿಂದ ದೂರವಿರಲು ಬಯಸುತ್ತಾರೆ. ಈ ದೇಶದಲ್ಲಿ ಮಹಾರ್ ಮಾಂಗ್ರಿಗೂ ಸ್ವರಾಜ್ಯ ಬೇಕು. ಆದರೆ ಸಧ್ಯದ ಸ್ವರಾಜ್ಯದ ಭಾನಗಡಿ ನೋಡಿದರೆ ಅದು ಇತರದ ಮಡಿಲಲ್ಲಿ ಬೀಳುತ್ತದೆ. ಸ್ವರಾಜ್ಯದಲ್ಲಿ ನಮಗೂ ಪಾಲು ಇರಬೇಕು;ಆದರೆ ಈ ಸ್ವರಾಜ್ಯ ಸಂಧಾನದಲ್ಲಿ ಅಂಥ ತಥ್ಯವಿಲ್ಲ ಎಂದು ನಾನು ಭಾವಿಸುತ್ತೇನೆ.ನನಗೆ ಬ್ರಿಟಿಷ್ ಸರ್ಕಾರದಲ್ಲಿ ನಂಬಿಕೆ ಇಲ್ಲವೆಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಈ ಸರ್ಕಾರ ನಮ್ಮನ್ನು ಉದ್ಧಾರಕ್ಕಾಗಿ ಏನನ್ನೂ ಮಾಡಲಾರದು. ನಮ್ಮ ಉದ್ಧಾರವನ್ನು ನಾವೇ ಮಾಡಿಕೊಳ್ಳಬೇಕು. ಅಸ್ಪೃಶ್ಯತೆ ಇರುವವರೆಗೆ ಸ್ವರಾಜ್ಯವಿಲ್ಲ ಸುಲಭದಲ್ಲಿ ಈ ದೇಶದ ಸಂತೋಷಕ್ಕಾಗಿ ಯಾರೂ ಸ್ವರಾಜ್ಯವನ್ನು ನೀಡುವುದಿಲ್ಲ. ಸಧ್ಯಕ್ಕೆ ಸ್ವರಾಜ್ಯ ವಿಚಾರದಲ್ಲಿ ಮಾತುಕತೆ ನಡೆಯುತ್ತಿದೆ. ಅದರಲ್ಲಿ ನಮ್ಮನ್ನು ಯಾರಾದರೂ ಕೇಳಿದ್ದಾರೆಯೆ? ಇದಕ್ಕಾಗಿ ನಾವೀಗ ಸ್ವರಾಜ್ಯವಾದಿಗಳಾಗಬೇಕು;ಆದರೆ ಅಂಥ ಸ್ವರಾಜ್ಯ ಸಿಕ್ಕರೂ ಏನಾಗುತ್ತದೆ? ನೀವು ಸ್ವರಾಜ್ಯಕ್ಕೆ ಅರ್ಹರಾಗಬೇಕು. ಹೋರಾಟ ಚೀರಾಟದಿಂದ ನಮಗೆ ಬೇಕಾದ ಅಧಿಕಾರ ಸಿಗಬಹುದು. ಆದರೆ ಜ್ಞಾನವಿಲ್ಲದೆ ಅದು ನಿಷ್ಪಯೋಜಕವಾಗಿದೆ. ಅಸ್ಪೃಶ್ಯರು ಕೇವಲ ಬಹುಸಂಖ್ಯಾತರAತೆ ಆಗಬೇಕಿಲ್ಲ. ಸ್ವರಾಜ್ಯವನ್ನು ಅನುಭವಿಸುವ ಅರ್ಹತೆ ಅವಶ್ಯಕವಾಗಿದೆ.

Keywords :

ಅಸ್ಪೃಶ್ಯ, ವಿದ್ಯಾರ್ಥಿ, ಯುವ ಸಮುದಾಯ.