ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೇಂದ್ರಗಳಲ್ಲಿ ತಂತ್ರಜ್ಞಾನ ಆದಾರಿತ ಭದ್ರತೆ ಮತ್ತು ಸುರಕ್ಷತಾ ವ್ಯವಸ್ಥೆಗಳ ಅದ್ಯಯನ
Author : ಡಾ.ಜಗದೀಶ ಎಂ.ವಿ and ಡಾ.ಜಯಕುಮಾರ
Abstract :
ಈ ಅದ್ಯಯನವು ಗ್ರಂಥಾಲಯದ ಬಳಕೆದಾರರಿಂದ ಉಂಟಾಗುವ ಭದ್ರತಾ ಕ್ರಿಯೆಯನ್ನು ಪರಿಶೀಲಿಸುತ್ತದೆ. ಹಾಗೂ ಇದನ್ನು ಇತರ ದೃಷ್ಟಿಕೋನದಿಂದ ನೋಡಿದರೆ, ಗ್ರಂಥಾಲಯದಿಂದ ವಿಸ್ತಾರವಾಗುವ ಜ್ಞಾನವನ್ನು ಸಂಘಟಿಸುವ ಅಗತ್ಯ ಹೆಚ್ಚುತ್ತದೆ,ಹಾಗೂ ಅದಕ್ಕೆ ಪೂರಕವಾದ ಸಾಕಷ್ಟು ಸೇವೆಗಳನ್ನು ಒದಗಿಸುವ ಅವಸ್ಯಕತೆ ಉದ್ಬವಿಸುತ್ತದೆ. ಇ ಹಿನ್ನೆಲೆಯಲ್ಲಿ ಗ್ರಂಥಾಲಯದ ಭದ್ರತೆ ಎಂಬುದು ಹೆಚ್ಚು ಪ್ರಮುಖವಾಗುತ್ತದೆ ಎಂದು ಹೇಳಬಹುದು. ಈ ಲೇಖನವು ಗ್ರಂಥಾಲಯದ ಮಾಹಿತಿಯನ್ನು ಗೊತ್ತಿರುವ ಸಂಪನ್ಮೂಲಗಳಲ್ಲಿ ಒಂದಾದ ಎಲೆಕ್ಟ್ರಾನಿಕ್ ಕ್ರಮಗಳನ್ನು ಬಳಸಿ ಹೇಗೆ ಭದ್ರಪಡಿಸಬಹುದು ಎಂಬುದನ್ನು ವಿವರಿಸುತ್ತದೆ.
ಈ ಲೇಖನದಲ್ಲಿ ಗ್ರಂಥಾಲಯಕ್ಕೆ ಭದ್ರತಾ ವ್ಯವಸ್ಥೆಯ ಅಗತ್ಯತೆ ಹಾಗೂ ಅಲ್ಲಿ ಅಳವಡಿಸಲಾದ ಭದ್ರತಾ ಸಾಧನಗಳ ವಿಧಗಳನ್ನು ಚರ್ಚಿಸಲಾಗಿದೆ. ಮಾಹಿತಿ ಸಂಪನ್ಮೂಲ ಭದ್ರತೆ ಎಂಬ ಪರಿಕಲ್ಪನೆ ಕುರಿತು ಹಾಗೂ ಮುಂದಿನ ಭವಿಷ್ಯಕ್ಕಾಗಿ ಗ್ರಂಥಾಲಯದ ಸಂಪನ್ಮೂಲಗಳನ್ನು ಭದ್ರಪಡಿಸುವ ಲಾಭಗಳು ಹಾಗೂ ಎಲೆಕ್ಟ್ರಾನಿಕ್ ಉತ್ತಮ ಭದ್ರತಾ ವ್ಯವಸ್ಥೆಯನ್ನು ಬಳಸಿ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳ ಕುರಿತು ಲಬ್ಯವಿರುವ ಸಾಹಿತ್ಯವನ್ನು ವಿಮರ್ಶಿಸಲಾಗಿದೆ.
Keywords :
ಗ್ರಂಥಾಲಯದ ಭದ್ರತೆ, ಎಲೆಕ್ಟ್ರಾನಿಕ್ ಭದ್ರತಾ ವ್ಯವಸ್ಥೆ, ಗ್ರಂಥಾಲಯದ ಸಂಪನ್ಮೂಲ/ಮಾಹಿತಿಯ ಭದ್ರತಾ ಕ್ರಮಗಳು.