Download PDF

ವಚನಗಳಲ್ಲಿ ಕೃಷಿ ಪರಿಕಲ್ಪನೆ

Author : ಶ್ರೀ ಬಾಬು ಅ. ಬೆಣ್ಣಿ

Abstract :

‘ಕೃಷಿ ತೋ ನಾಸ್ತಿ ದುರ್ಭೀಕ್ಷಂ’ ಎನ್ನುವ ಮಾತಿನಂತೆ ಕೃಷಿ ನಂಬಿದರೆ ಅದು ಎಂದಿಗೂ ಕೈಬಿಡುವುದಿಲ್ಲ. ಕೃಷಿ ಒಂದು ಕಾಮದೇನು ಮತ್ತು ಕಲ್ಪವೃಕ್ಷವಿದ್ದಂತೆ. ಮಹತ್ವ ಅರಿತು ಕೃಷಿಯಲ್ಲಿ ತೊಡಗಿಕೊಂಡರೆ ಯಶಸ್ಸು ಖಂಡಿತ ಎಂದು ವಚನ ಸಾಹಿತ್ಯದ ಮೂಲಕ ಹನ್ನೆರಡನೆಯ ಶತಮಾನದ ಬಸವಾದಿ ಶರಣರು ನುಡಿದ್ದಿದ್ದಾರೆ. ರೈತನ ಪರಿಶ್ರಮದ ಬಗ್ಗೆ ಹೇಳಲು ಪದಗಳೇ ಸಾಲುವುದಿಲ್ಲ. ನಿಶ್ಚಲತೆಯಿಂದ ತಲೆದಿಂಬಿಗೆ ತಲೆ ಇಟ್ಟ ಕ್ಷಣ ನಿದ್ದೆಗೆ ಜಾರುವ ಭೂಮಿಯ ಮೇಲಿರುವ ಏಕೈಕ ವ್ಯಕ್ತಿ ಎಂದರೆ ಆತನೇ ರೈತ. ಬಸವಣ್ಣನವರು ಹೇಳಿದಂತೆ ‘ಕಾಯಕವೇ ಕೈಲಾಸ’ ಎಂಬುದು ಅದ್ಬುತ ವಿಚಾರ, ಯಾವತ್ತಿಗೂ ರೈತ ಗೌರವ, ಸನ್ಮಾನ, ಪ್ರಶಸ್ತಿ, ಮನ್ನಣೆ ಮುಂತಾದವುಗಳಿಗೆ ಎಂದಿಗೂ ಕೈಚಾಚುವುದಿಲ್ಲ ಅದು ಅವನ ದೊಡ್ಡ ಗುಣ. ಜೀವನಾನುಭವಕ್ಕೆ ಅತಿ ಹತ್ತಿರವಾದ ವಚನ ಸಾಹಿತ್ಯದಲ್ಲಿ ಜನಸಾಮಾನ್ಯರ ಮುಖ್ಯ ಜೀವನ ಮಾರ್ಗವಾದ ಕೃಷಿಗೆ ಸಂಬAಧಪಟ್ಟ ವಿಚಾರಗಳು ಗಂಭೀರ ಚಿಂತನೆಗೆ ಒಳಪಟ್ಟಿರುವವವುದನ್ನು ವಚನಗಳ ಹಿನ್ನಲೆಯಲ್ಲಿ ಪರಿಶೀಲನೆಗೆ ಒಳಪಡಿಸಲಾಗಿದೆ.

Keywords :

ಸಿದ್ಧರಾಮನ ವಚನ, ಅಲ್ಲಮಪ್ರಭು ವಚನ, ಸೊಡ್ಡಳ ಬಾಚರಸ ವಚನ, ಒಕ್ಕಲಿಗ ಮುದ್ದಣ್ಣ ವಚನ, ಚೆನ್ನಬಸವಣ್ಣ ವಚನ