Download PDF

ಶಕ್ತಿ ಯೋಜನೆ ಕುರಿತು ಒಂದು ಸಮಾಜಶಾಸ್ತಿçÃಯ ಅವಲೋಕನ (ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿಗೆ ಸಂಬAಧಿಸಿದAತೆ)

Author : Dr. Sanganagowda Shivanagowda and Vijayalakshmi Katti

Abstract :

ಪ್ರಾಚೀನ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಮಹಿಳೆಯರು ಹಲವಾರು ಅವಕಾಶಗಳಿಂದ ವಂಚಿತರಾಗುತ್ತಾ ಬಂದಿದ್ದಾರೆ. ಒಂದು ಕಾಲದಲ್ಲಿ ಅವಳನ್ನು ಅಸ್ತಿತ್ವವಿಲ್ಲದ ಗುಲಾಮಗಳಂತೆ ಕೀಳಾಗಿ ನಡೆಸಿಕೊಂಡು ಅನೇಕ ರೀತಿಯಲ್ಲಿ ಶೋಷಣೆಗೆ ಒಳಗಾಗಿದ್ದಳು. ಅದೇ ಕಾಲದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದಾಗ ಮಹಿಳೆಯನ್ನು ದೇವತೆಗೆ ಹೋಲಿಸಿದ ಉದಾಹರಣೆಗಳಿವೆ. ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿರುವ ಮಹಿಳೆಯರಿಗೆ ಪುರುಷರಷ್ಟೇ ಸರಿಸಮಾನವಾದ ಅಂತಸ್ತು ಮತ್ತು ಅವಕಾಶಗಳನ್ನು ಕೊಡಲು ಅವರನ್ನು ಸಬಲರನ್ನಾಗಿ ಮಾಡಲು ಅನೇಕ ಅಭಿವೃದ್ದಿ ಕಾರ್ಯಯೋಜನೆಯನ್ನು ಕೈಗೊಳ್ಳಲಾಯಿತು. ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ಒದಗಿಸುವ ಮೂಲಕ ಅವರನ್ನು ಸಾಮಾಜಿಕವಾಗಿ ಮುಖ್ಯವಾಹಿನಿಗೆ ತರಲು ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸುವ ಶಕ್ತಿಯಾಗಿದೆ. ಪ್ರಸ್ತುತ ಲೇಖನದಲ್ಲಿ ಕರ್ನಾಟಕ ಶಕ್ತಿ ಯೋಜನೆಯನ್ನು ಕುರಿತು ಅವಲೋಕಿಸಲಾಗಿದೆ.

Keywords :

ಮಹಿಳೆಯರಿಗೆ ಉಚಿತ ಬಸ್ ಸೇವೆ, ಸಬಲೀಕರಣ,ಶಕ್ತಿ ಯೋಜನೆ