ಮಾದಾರ ಚೆನ್ನಯ್ಯ ಮತ್ತುಜೇಡರ ದಾಸಿಮಯ್ಯನವರ ವೈಚಾರಿಕ ನಿಲುವು
Author : ಡಾ.ಸಣ್ಣೀರಪ್ಪ ಹಾಲಪ್ಪ ದೊಡ್ಡಮನಿ
Abstract :
ಡಂಗುರವಾದ ಬೊಗಳೆತನವು ಭಯ ಬಿದ್ದು, ಪ್ರಭುತ್ವದ ಆಗರವಾಗಿದ್ದ ತನ್ನ ಅಸ್ತಿತ್ವ ಕಳೆದುಕೊಂಡು ಓಡಿಹೋದವು. ಜಪ-ತಪ ನೇಮಗಳು ನುಚ್ಚುನೂರಾದ ಬಗೆ, ಶಾಸ್ತ್ರಗಳೆಲ್ಲ ಕೊಚ್ಚಿಹೋದ ಮತ್ತುಜೊಳ್ಳುಕಥೆ ಹಾಳಾದ ದೃಶ್ಯ ಇಲ್ಲಿತೆರೆದುಕೊಂಡಿದೆ. ಜಾತಿ-ವರ್ಗಗಳು ನಾಶವಾಗಿ ಶರಣ ಬೆಳಗು ಬೆಳೆಯಬೇಕೆಂಬ ಹರಿಹರನ ಆಶಯ. ದೇವಾಲಯ ಪ್ರವೇವಿಲ್ಲದ ದಮನಿತರನ್ನುದೇವನೇಹುಡುಕಿ ಕೊಂಡು ಬರುತ್ತಾನೆ. ದೇವರಿಗಾಗಿ ಹಂಬಲಿಸದೆ ಅಂತರಂಗದ ಭಕ್ತಿಯಲ್ಲಿಆರಾಧಿಸಿ, ದೇಹದೊಳಗೆ ದೇವಾಲಯ ಮತ್ತುದೇವನಿದ್ದಾನೆ. ನಡೆ ನುಡಿ ಸಿದ್ಧಾಂತವಾಗಬೇಕು. ಮನುಷ್ಯನ ಬದುಕು ನಶೆ ಒಂದು ಬಗೆಯಾದರೆ, ನುಡಿಯೊಂದು ಬಗೆಯಾಗಕೂಡದು. ವಿಪ್ರರಿಗೆ ತಮಗೊಂದು ಬಟ್ಟೆಇತರರಿಗೊಂದು ಬಟ್ಟೆ. ಲಿಂಗಾಯತದಲ್ಲಿಬಹಳ ಸ್ಪಷ್ಟ ಬದುಕು-ನುಡಿ ಬೇರೆ ಬೇರೆ ಅಲ್ಲ. ಹೀಗಾದರೆ ಕುಲಹೊಲೆ ಸೂತಕವಿಲ್ಲ ಎಂಬುದನ್ನುಚನ್ನಯ್ಯನು ಸ್ಪಷ್ಟವಾಗಿ ನುಡಿಯುವನು.
Keywords :
ಮಾ.ಚೆ:- ಮಾದಾರ ಚೆನ್ನಯ್ಯ, ಶಿ.ಭ:- ಶಿವಭಕ್ತಿ, ನ.ನು.ಸಿ:- ನಡೆ ನುಡಿ ಸಿದ್ಧಾಂತ, ರಾ.ನಾ:- ರಾಮನಾಥ, ಲಾ.ಮು.:- ಲಾಳಿಯ ಮುಳ್ಳು